
6 ಇಂಚು ಮಣ್ಣಿನಲ್ಲಿದೆ ಕೃಷಿಯ ಸರ್ವಸ್ವ.
ನಮ್ಮ ಹೊಲದ 6 ಇಂಚು ಮಣ್ಣು ಇದರಲ್ಲೇ ಕೃಷಿಯ ಸರ್ವಸ್ವವೂ ಅಡಗಿರುವುದು. ಮಣ್ಣಿಗೆ ಜೀವ ಇದೆ. ಅದು ಉಸಿರಾಡುತ್ತದೆ. ಅದು ಸಂವೇದನಾಶೀಲ. ಅದನ್ನು ಕೊಲ್ಲಬಹುದು, ಬದುಕಿಸಬಹುದು ಎಲ್ಲವೂ ನಮ್ಮ ಕೈಯಲ್ಲಿದೆ. ಒಟ್ಟಿನ್ಬಲ್ಲಿ 6 ಇಂಚು ಮಣ್ಣು ಕೃಷಿ ಭೂಮಿಯ ಜೀವ. ಇದನ್ನು 6 ರಿಂದ 7 ಹೀಗೆ ಹೆಚ್ಚು ಮಾಡುವ ಪ್ರಯತ್ನ ಮಾಡಬೇಕು. ಭೂಮಿ ಅಥವಾ ಮಣ್ಣು ಪಂಚಭೂತಗಳಲ್ಲಿ ಒಂದು . ಇದು ಮಾನವನ ಉಳಿವು ಅಳಿವುಗಳಿಗೆ ಆಧಾರ. ಇದನ್ನು ತಾಯಿಗೆ ಸಮಾನ ಎಂದೂ ಪರಿಗಣಿಸಲಾಗುತ್ತದೆ. ಇದು…