
ಸರಳವಾಗಿ ಬೋರ್ಡೋ ದ್ರಾವಣ (Bordeaux) ತಯಾರಿಸುವ ವಿಧಾನ
ಬೋರ್ಡೋ ದ್ರಾವಣ ತಯಾರಿಕೆ ಎಂಬುದು ಅತ್ಯಂತ ಸರಳ ವಿಧಾನ. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಾಕ ಅಪಾಕವಾಗುತ್ತದೆ. ಇದು ಸಿಂಪರಣೆಗೆ ಕಿರಿ ಕಿರಿ ಉಂಟು ಮಾಡುತ್ತದೆ. ಕೊಳೆ ಉಂಟುಮಾಡುವ ರೋಗಾಣುಗಳಿಗೂ ಇದು ಪರಿಣಾಮಕಾರಿಯಾಗಲಾರದು. ಹಾಗಾಗಿ ಕ್ರಮವನ್ನು ಸರಿಯಾಗಿ ತಿಳಿದುಕೊಂಡು ಮಾಡಿದರೆ ಪಾಕ ಸರಿಯಾಗಿರುತ್ತದೆ. ಮೈಲುತುತ್ತೆ ಮತ್ತು ಸುಣ್ಣದ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಹೆಸರು. ಶೇ. 1 ರ ದ್ರಾವಣ ಎಂದರೆ 1000 ಗ್ರಾಂ ತಾಮ್ರದ ಸಲ್ಫೇಟ್ ಅನ್ನು 100 ಲೀ. ನೀರಿನಲ್ಲಿ ದ್ರವೀಕರಿಸುವುದು. ಮೈಲುತುತ್ತೆ…