
ಹಸಿಸೊಪ್ಪು ಮಣ್ಣಿಗೆ ಹಾಕುವುದರ ಪ್ರಯೋಜನ ಏನು?.
ಮಣ್ಣಿನ ಫಲವತ್ತತೆ ಹೆಚ್ಚಲು ನಿರಂತರವಾಗಿ ಹಸಿಸೊಪ್ಪು, ತರಗೆಲೆ ಮುಂತಾದ ಸಾವಯವ ವಸ್ತುಗಳನ್ನು ಸೇರಿಸುತ್ತಾ ಇರಬೇಕು. ಒಣ ತರಗೆಲೆಗಿಂತ ಹಸಿ ಸೊಪ್ಪು ಹೆಚ್ಚು ಉತ್ತಮ. ಕೃಷಿ ಮಾಡುವ ಮಣ್ಣು ಒಂದೆಡೆ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಇರುತ್ತದೆ. ಅದನ್ನು ಮರುಪೂರಣ ಮಾಡಲು ಸಾವಯವ ವಸ್ತುಗಳನ್ನು ಸೇರಿಸುತ್ತಾ ಇರಬೇಕು. ಎಲ್ಲದಕ್ಕಿಂತ ಅಗ್ಗದ ಉತ್ತಮ ಸ್ಥೂಲ (Bulk)ಸಾವಯವ ವಸ್ತು ಸೊಪ್ಪು, ತರಗೆಲೆ ಮತ್ತು ಬೆಳೆ ತ್ಯಾಜ್ಯಗಳು. ಕೃಷಿಕರಾದ ನಾವೆಲ್ಲಾ ಮಣ್ಣು ಹೇಗೆ ರಚನೆಯಾಯಿತು ಎಂಬುದರ ಬಗ್ಗೆ ತಿಳಿಯಬೇಕು. ಗಡಸು, ಮೆದು ಶಿಲೆಗಳು ಬಿಸಿಲು, ಮಳೆ,ಗಾಳಿ…