MOP ಗೊಬ್ಬರ: ಕಾರ್ಖಾನೆಯ ರಸಗೊಬ್ಬರ ಅಲ್ಲ, ಭೂಮಿಯ ಖನಿಜದ ವರ
ಬಹಳಷ್ಟು ರೈತರು ಮತ್ತು ಸಾಮಾನ್ಯ ಜನರು ಮ್ಯೂರಿಯೇಟ್ ಆಫ್ ಪೊಟಾಶ್ (MOP) ಅನ್ನು ರಾಸಾಯನಿಕ ಗೊಬ್ಬರ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಇದು ಸತ್ಯವಲ್ಲ. ಮ್ಯೂರಿಯೇಟ್ ಆಫ್ ಪೊಟಾಶ್ ವಾಸ್ತವವಾಗಿ ಪ್ರಾಕೃತಿಕ ಖನಿಜ, ಇದು ಯೂರಿಯಾ ಅಥವಾ DAP ಮಾದರಿಯಂತೆ ಕಾರ್ಖಾನೆಯಲ್ಲಿ ತಯಾರಿಸಲ್ಪಟ್ಟದ್ದಲ್ಲ. ಲಕ್ಷಾಂತರ ವರ್ಷಗಳ ಹಿಂದೆ ಸಮುದ್ರಗಳ ನೀರು ಆವಿಯಾಗಿ ಅದರಲ್ಲಿ ಸೇರಿರುವ ಖನಿಜ ನಿಕ್ಷೇಪ ಅಲ್ಲೇ ತಂಗಲ್ಪಟ್ಟು ಇದು ರೂಪುಗೊಂಡಿದೆ. ಇಂದಿಗೂ ಭೂಗರ್ಭದಲ್ಲಿ ನಿಕ್ಷೇಪಗಳ ರೂಪದಲ್ಲಿ ಅಡಗಿದೆ. ಗಣಿಗಾರಿಕೆಯಿಂದ ತೆಗೆದು ಸರಳ ಶುದ್ಧೀಕರಣ ಮತ್ತು…
