
ಬೋರ್ಡೋ ದ್ರಾವಣಕ್ಕೆ ಸುಣ್ಣ ಹೆಚ್ಚಾದರೆ ಏನಾಗುತ್ತದೆ?
ಬೋರ್ಡೋ ದ್ರಾವಣ ತಯಾರಿಸಲು ಬಳಸುವ ಮೂಲವಸ್ತುಗಳೆಂದರೆ ಮೈಲುತುತ್ತೆ ಮತ್ತು ಸುಣ್ಣ. ಇವೆರಡರ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಕರೆಯುತ್ತಾರೆ. ಇಲ್ಲಿ ಸಮಪಾಕ ಎಂಬ ಒಂದು ತತ್ವ ಇದೆ. ಇದನ್ನು ಪಾಲಿಸದಿದ್ದರೆ ಅದು ಸರಿಯಾದ ಮಿಶ್ರಣ ಆಗಲಾರದು. ಇದನ್ನು ಪ್ರತೀಯೊಬ್ಬ ರೈತರೂ ತಿಳಿದಿರಬೇಕು. ಅಡಿಕೆ ಮರದ ಕೊಳೆ ರೋಗ ನಿಯಂತ್ರಣಕ್ಕೆ ಹಾಗೆಯೇ ಇನ್ನಿತರ ಬೆಳೆಗಳ ಕೊಳೆ ರೋಗದ ಶಿಲೀಂದ್ರಗಳನ್ನು ತಡೆಯಲು ಶಿಫಾರಿತ ಪ್ರಮಾಣದ ಬೋರ್ಡೋ ದ್ರಾವಣ ಎಂದರೆ ಶೇ. 1 . ಅಂದರೆ 1 ಕಿಲೋ ಮೈಲು…