ಪೋಷಕ ಮತ್ತು ಶಿಲೀಂಧ್ರನಾಶಕ ಸಿಂಪರಣೆಗೆ ಸೂಕ್ತ ಸಮಯ.
ಕೃಷಿಕರು ತಾವು ಬೆಳೆಸುವ ಬೆಳೆಗಳಿಗೆ ಪೋಷಕಾಂಶ, ಶಿಲೀಂದ್ರ ನಾಶಕ ಹಾಗೆಯೇ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಆದರೆ ಹೆಚ್ಚಿನವರು ಅದಕ್ಕೆ ಸೂಕ್ತ ಸಮಯ ಯಾವುದು ಎಂದು ತಿಳಿದಿರುವುದಿಲ್ಲ. ಎಲ್ಲಾ ಪೋಷಕಾಂಶ, ಶಿಲೀಂದ್ರ ನಾಶಕ ಹಾಗೆಯೇ ಕೀಟನಾಶಕಗಳನ್ನು ತಂಪಾದ ಜಾಗದಲ್ಲಿ (keep in cool place) ಇದಬೇಕು ಎಂದು ಹೇಳಿರುತ್ತಾರೆ. ಕಾರಣ ಅದರ ಕ್ರಿಯಾತ್ಮಕ ಗುಣ ಚೆನ್ನಾಗಿರಲು. ಹಾಗೆಯೇ ಸಿಂಪರಣೆಗೂ ಸಹ ತಂಪಾದ ಹವಾಮಾನ ಇದ್ದರೆ ಅದರ ಫಲಿತಾಂಶ ದುಪ್ಪಟ್ಟು. ಇಂದು ಕೃಷಿಯಲ್ಲಿ ಫೋಲಿಯರ್ ಸಿಂಪಡಣೆ, ಪತ್ರ ಸಿಂಚನ (Foliar Spray)…
