ಈ ನೀಲಿ ದ್ರಾಕ್ಷಿಗೆ ರಾಸಾಯನಿಕ ಮುಕ್ತ – ಸಿಂಪರಣೆಯ ಅಗತ್ಯವಿಲ್ಲ.
ಬೆಂಗಳೂರು ಸುತ್ತಮುತ್ತ ನೂರಾರು ವರ್ಷಗಳಿಂದ ಬೆಳೆಯುತ್ತಿರುವ ನೀಲಿ ದ್ರಾಕ್ಷಿ ಅಥವಾ ಬೀಜ ಉಳ್ಳ ಕಪ್ಪು ರಾಸಾಯನಿಕ ಮುಕ್ತವಾಗಿ ಬೆಳೆಯಬಲ್ಲ ತಳಿ. ಇದನ್ನು ಬಾಲರಿಂದ ಹಿಡಿದು ವೃದ್ಧರ ವರೆಗೂ ಯಾವುದೇ ಅಂಜಿಕೆ ಇಲ್ಲದೆ ಸೇವಿಸಬಹುದು. ಇದು ಒಂದು ನಾಟಿ ತಳಿಯಾಗಿದ್ದು, ರೋಗ ಕೀಟ ಬಾಧೆ ಕಡಿಮೆ ಇರುವ ಕಾರಣ ಯಾರೂ ಅನವಶ್ಯಕ ಕೀಟನಾಶಕ- ರೋಗ ನಾಶಕ ಸಿಂಪಡಿಸುವುದಿಲ್ಲ. ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ತರಾವಳಿ ದ್ರಾಕ್ಷಿ ಹಣ್ಣುಗಳಿರುತ್ತವೆ. ನೀವೇನಾದರೂ ಕಡಿಮೆ ಬೆಲೆಗೆ ದೊರೆಯುವ ಬೆಂಗಳೂರು ನೀಲಿ ದ್ರಾಕ್ಷಿಯನ್ನು /ಬೆಂಗಳೂರು…
