ಸಾಗುವಾನಿ ಮರದ ಬುಡದಲ್ಲಿ ಒಣ ಸೊಪ್ಪು

ಸಾಗುವಾನಿ ಮರದ ಬುಡದ ಮಣ್ಣು ಬಂಗಾರ.

ನಿಮ್ಮಲ್ಲಿ ಸಾಗುವಾನಿ ಮರ ಇದೆಯೇ , ಅದರ ಬುಡದಲ್ಲಿ ಬಿದ್ದ ತರಗೆಲೆಯ ಅಡಿಯ ಮಣ್ಣನ್ನು ಒಮ್ಮೆ ಗಮನ ಇಟ್ಟು ನೋಡಿ. ಇದು ಫಲವತ್ತಾದ ರಸಸಾರ ತಟಸ್ಥ ಇರುವ ಮೆಕ್ಕಲು ಮಣ್ಣಾಗಿರುತ್ತದೆ. ಸಾಗುವಾನಿ ಮರದ ಎಲೆಗಳು ಮಣ್ಣನ್ನು ಫಲವತ್ತಾಗಿಸುತ್ತದೆ, ಹಾಗೆಯೇ ಮಣ್ಣಿನ pH  ಅನ್ನು ಸರಿಮಾಡಿಕೊಡುತ್ತದೆ. ಸಾಗುವಾನಿ ಮರದ ಬುಡದಲ್ಲಿ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ಇರುತ್ತವೆ ಎಂಬುದಾಗಿ ಕೇರಳದ ಅರಣ್ಯ ಸಂಶೊಧಾನ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ. ಇದರ ಎಲೆಯ ಗಾತ್ರ, ಅದರ ತೂಕ, ಅದು ಕರಗುವ ವೇಗ…

Read more
ಗಂಡು ಕರು ಸಾಕಿದರೆ ತಿಂಗಳಿಗೆ 1500 ರೂ. ಆದಾಯ.

ಗಂಡು ಕರು ಸಾಕಿದರೆ ತಿಂಗಳಿಗೆ 1500 ರೂ. ಆದಾಯ.

ಹಸು ಗಂಡು ಕರು ಹಾಕಿತೆಂದರೆ ತಲೆಬಿಸಿ ಮಾಡಿಕೊಂಡು ಅದನ್ನು ತರಾತುರಿಯಲ್ಲಿ ಕಸಾಯಿಗೆ 500-1000ರೂ. ಗಳಿಗೆ ಮಾರಬೇಡಿ. ಅದರಿಂದ ತಿಂಗಳಿಗೆ 1500 ರೂ. ಆದಾಯ ಇದೆ ಎಂದರೆ ನಂಬುತ್ತೀರಾ? ನಿಜವಾಗಿಯೂ ಇದೆ. ಒಂದು ಗಂಡು ಕರು ದಿನಕ್ಕೆ ಒಂದು ಬುಟ್ಟಿ ಗೊಬ್ಬರ ತಯಾರಿಸುತ್ತದೆ. ಇಷ್ಟು ಗೊಬ್ಬರವನ್ನು ನಾವು ಖರೀದಿಸುವುದೇ ಆದರೆ ಅದಕ್ಕೆ ರೂ.50 ಕೊಡಬೇಕು. ನಾವೇ ಅದನ್ನು ಸಾಕಿದರೆ ಕೊಡುವ ರೂ.50 ಉಳಿಯುತ್ತದೆ. ವಾರ್ಷಿಕ 18,000 ರೂ. ಗಳ ಗೊಬ್ಬರ ನಮ್ಮಲ್ಲೇ ಉತ್ಪಾದಿಸಬಹುದು. ಬಹಳ ಜನ ಗಂಡು ಕರು…

Read more
ಬಳಕೆಗೆ ಸಿದ್ದವಾದ ಸುಡುಮಣ್ಣು – Sudumannu ready to use.

ಸುಡುಮಣ್ಣು – ಇದು ಮಣ್ಣಿನ ಆರೋಗ್ಯ ರಕ್ಷಕ ಡಾಕ್ಟರ್.

ಎಲ್ಲಾ  ತರಹದ ಮಣ್ಣು ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಮಣ್ಣಿನಲ್ಲಿ ಬೆಳೆಗಳಿಗೆ  ಹಾನಿಕಾರಕ ರೋಗಾಣುಗಳು ಮತ್ತು ಕೀಟದ ಮೊಟ್ಟೆಗಳು ಇರಬಹುದು. ಅಂತಹ ಸಂಶಯ ಇರುವ ಮಣ್ಣನ್ನು ಸ್ವಲ್ಪ ಬಿಸಿ ಪ್ರಕ್ರಿಯೆಗೆ ಒಳಪಡಿಸಿ ಸುಡುಮಣ್ಣಾಗಿ ಪರಿವರ್ತಿಸಿದರೆ,  ಅದು ಪೂರ್ಣ ಸ್ಟೆರಿಲೈಸ್ ಮಾಡಿದ  ಸ್ವಚ್ಚ ಶುದ್ಧ ಮಣ್ಣಾಗುತ್ತದೆ. ಮಣ್ಣನ್ನು ಸ್ವಲ್ಪ ಬಿಸಿ ಮಾಡಿದಾಗ ಅದಕ್ಕೆ ಕರಕಲು ಸಾವಯವ ತ್ಯಾಜ್ಯ ಸೇರಿದಾಗ ಅದು ಸಾವಯವ ಇಂಗಾಲವನ್ನು (Carbon – bio char ) ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಸಾವಯವ ತ್ಯಾಜ್ಯಗಳು ಮಣ್ಣನ್ನು ಜೈವಿಕವಾಗಿ ಶ್ರೀಮಂತಿಕೆಗೆ…

Read more
ಸಾವಯವ ಕೃಷಿಕ -Organic farmer -

ಸಾವಯವ ಬೇಸಾಯ ರಾಷ್ಟ್ರೀಯ ನಷ್ಟಕ್ಕೆ ಒಂದು ಕೊಡುಗೆಯೇ?.

ಬಹಳ ಜನ ಸಾವಯವ ಬೇಸಾಯ ಕ್ರಮವನ್ನು ತಮ್ಮ ಮೈಮೇಲೆ ಎಳೆದುಕೊಂಡವರಂತೆ ವರ್ತಿಸುತ್ತಾರೆ. ಇವರಲ್ಲಿ ಗರಿಷ್ಟ ಜನ ರಜಾ ಕಾಲದ ಕೃಷಿಕರು. ಮತ್ತೆ ಕೆಲವರು ಕಾಟಾಚಾರಕ್ಕೆ ಕೃಷಿ ಮಾಡುವವರು. ನಾನು ಸುಮಾರು 20 ವರ್ಷಕ್ಕೆ ಹಿಂದೆ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಸಾಲದ ಹಣ. ಭೂಮಿಯ ಬೆಲೆ ಆಗಲೇ ದುಬಾರಿಯಾಗಿತ್ತು. ನನಗೆ ಭೂಮಿಗೆ ಹಾಕಿದ ಹಣ , ನನ್ನ ಬೇಸಾಯದ ಖರ್ಚನ್ನು ಹಿಂಪಡೆಯುವ ಬಯಕೆ ಸಹಜವಾಗಿ ಎಲ್ಲರಿಗೂ ಇದ್ದಂತೆ ಇತ್ತು. ನಾನು ಸಾವಯವ ಕೃಷಿ ಎಂದು ಅದರ…

Read more
farmer ploughing field

ಮುಂಗಾರು ಹಂಗಾಮಿಗೆ ಮಾಡಬೇಕಾದ ಪೂರ್ವ ಸಿದ್ದತೆಗಳು

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಗಳು ವಾಡಿಕೆಯಂತೆ ಆಗುತ್ತವೆ ಎಂಬುವುದು ಹವಾಮಾನ ತಜ್ಞರ ಅಭಿಪ್ರಾಯ. ಆದ್ದರಿಂದ ರೈತರು ಸ್ಥಳೀಯ ಪರಿಸ್ಥಿತಿಗಳನ್ನು ಅವಲೋಕಿಸಿ ಮುಂಗಾರು ಬೆಳೆಗಳ ಯೋಜನೆಯನ್ನು ಹಮ್ಮಿಕೊಳ್ಳುವುದು ಸೂಕ್ತ. ಈಗಾಗಲೇ ಅನೇಕ ಕಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ರೈತರು ತಮ್ಮ ಜಮೀನುಗಳಲ್ಲಿ ಕುಂಟೆ-ರಂಟೆಗಳನ್ನು ಹೊಡೆದು ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಚೌಕ ಮಡಿಗಳನ್ನು ಮತ್ತು ದಿಂಡು ಸಾಲುಗಳನ್ನು ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸುವುದರಿಂದ, ಬಂದ ಮಳೆ ನೀರು ಮಡಿಗಳಲ್ಲಿ ಮತ್ತು ಬೋದುಗಳಲ್ಲಿ ನಿಲ್ಲುವುದರಿಂದ ಮಣ್ಣಿನ ತೇವಾಂಶ ಹೆಚ್ಚು ಸಂಗ್ರಹವಾಗಿ…

Read more
ಫಲವತ್ತಾದ ಫಲ್ಗುಣಿ ನದಿಯ ಮುಖಜ ಭೂಮಿಯಲ್ಲಿ ಬೆಳೆದ ರುಚಿಕಟ್ಟಾದ ಕಲ್ಲಂಗಡಿ.

ಮಣ್ಣು ಫಲವತ್ತತೆ ಇದ್ದಾಗ ಅಲ್ಲಿ ಬೆಳೆದ ಫಸಲಿಗೆ ರುಚಿ ಹೆಚ್ಚು.

ಜನ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಮುಖ್ಯವಾಗಿ ರಸ ಗೊಬ್ಬರ, ಹೈಬ್ರೀಡ್ ಬೀಜಗಳಿಂದ ತಾವು ಬಳಸುವ ಹಣ್ಣು ತರಕಾರಿಗಳಲ್ಲಿ ರುಚಿ ಹೋಗಿದೆ ಎಂದು. ವಾಸ್ತವವಾಗಿ ಇದು ಸತ್ಯವಲ್ಲ. ಸತ್ಯ ಸಂಗತಿ ಬೇರೆಯೇ ಇದೆ. ಅದು ಮಣ್ಣಿನ ಫಲವತ್ತತೆ. ರುಚಿ ಎನ್ನುವುದು ಹಸಿದವನ ನಾಲಗೆಗೆ ಹೆಚ್ಚು, ಹಸಿವು ಇಲ್ಲದವನಿಗೆ ಕಡಿಮೆ. ಹಾಗೆಂದು ಕೆಲವೊಮ್ಮೆ ಬದಲಾವಣೆ ರುಚಿ ಕೊಡುತ್ತದೆ. ಆದರೆ ಪ್ರತೀಯೊಂದು  ಆಹಾರ ವಸ್ತುವಿಗೂ ಅದರದ್ದೇ ಆದ ರುಚಿ ಗುಣ ಇರುತ್ತದೆ. ಅದು ಬರುವುದು ಆ ನಿರ್ದಿಷ್ಟ ಪ್ರದೇಶದ ಹವಾಗುಣ, ಮಣ್ಣು…

Read more
tasty vegetable grown with out manure

ನಾವು ತಿನ್ನುವ ಆಹಾರ ರುಚಿ ಇರುವುದಿಲ್ಲ ಕಾರಣ ಇಷ್ಟೇ

ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆದ ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಅದಕ್ಕೆ ರುಚಿಯೂ ಇರುತ್ತದೆ. ಆರೋಗ್ಯಕ್ಕೂ ಉತ್ತಮ. ಮಣ್ಣಿಗೆ ಜೀವ ಇದೆ.ಇದು ಕೃಷಿಗೆ ಜೀವ ಕೊಡುತ್ತದೆ . ಮಣ್ಣಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಸೇರಿಕೊಂಡಿವೆ . ಮಣ್ಣು ಇಲ್ಲದೆ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಯಾವುದೇ ಜೀವಿ ಇಲ್ಲದೇ ಮಣ್ಣು ಆಗಲು ಸಾಧ್ಯವಿಲ್ಲ. ಒಂದು ಇಂಚು ಮಣ್ಣು ಆಗಬೇಕಾದರೆ ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಇಂದು ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು,…

Read more

ಸಾವಯವ ಕೃಷಿಗೆ ದೊಣ್ಣೆ ನಾಯಕರ ಸಲಹೆ ಬೇಕಾಗಿಲ್ಲ.

ಸಾವಯವ ಕೃಷಿ ಎಂಬುದು ನಮ್ಮ ಪರಂಪರೆಯಿಂದ ನಡೆದು ಬಂದ ಕೃಷಿ ಪದ್ದತಿ. ಇತ್ತೀಚೆಗೆ ಕೆಲವು ಜನರಿಗೆ ಸಾವಯವ  ಹೆಸರೇ  ಮೈಮೇಲೆ ದೆವ್ವ ಬಂದಂತೆ  ಬರುತ್ತಿರುವುದು ವಿಪರ್ಯಾಸ. ಸಾವಯವ ಕೃಷಿ ಎಂದರೆ ಮಣ್ಣನ್ನು ಫಲವತ್ತಾಗಿಸಿಕೊಂಡು ಅದನ್ನೇ ಪೊಷಕಾಂಶ ಭರಿತವಾದ ಬೆಳೆ ಮಾಧ್ಯಮವಾಗಿ ಮಾಡಿ ಕೃಷಿ ಮಾಡುವುದು.  ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆಗೆ ಬೇರೆ ಪೋಷಕಾಂಶಗಳು ಬೇಕಾಗುವುದಿಲ್ಲ. ಬೆಳೆ ಬೆಳೆದಂತೆ ಫಲವತ್ತಾದ ಮಣ್ಣಿನ ಪೋಷಕಗಳು ಉಪಯೋಗವಾಗಿ ಕಡಿಮೆಯಾಗುತ್ತಾ ಬರುತ್ತದೆ. ಅದನ್ನು ಮತ್ತೆ ಮತ್ತೆ ನವೀಕರಿಸುತ್ತಾ ಬೆಳೆ ಬೆಳೆಯಬಹುದು. ಈ…

Read more

ಜೈವಿಕ ಬೆಳೆ ಪೋಷಕಗಳನ್ನು ಬಳಸುವಾಗ ಎಚ್ಚರವಿರಲಿ.

ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಬಗ್ಗೆ ಹೇಳುವುದೇ ಆದರೆ ಅವುಗಳ ಅಸಮತೋಲನ ಉಂಟಾದರೆ ಅದೂ ಸಹ ತೊಂದರೆದಾಯಕ. ಇದು ಜೈವಿಕ ಉತ್ಪನ್ನಗಳ ಪ್ರಚಾರದ ಕಾಲ. ಸಾವಯವ , ಹಾನಿ ರಹಿತ, ಪರಿಸರ ಸ್ನೇಹಿ, ಎಂದೆಲ್ಲಾ ಪ್ರಚಾರಗಳ ಮೂಲಕ ರೈತರಿಗೆ ಜೈವಿಕ ಉತ್ಪನ್ನಗಳನ್ನು ಪರಿಚಯಿಸಲಾಗುತ್ತದೆ. ಜೈವಿಕ ಉತ್ಪನ್ನ್ಗಗಳ ಬಗ್ಗೆ ಹೇಳುವುದೆಲ್ಲಾ ನಿಜವಲ್ಲ. ಇದೂ ಸಹ ಅತಿಯಾದರೆ ತೊಂದರೆ ಉಂಟು. ಕೃಷಿಕರಲ್ಲಿ ಕೆಲವರಿಗೆ ಕಾಲು ಹಿಮ್ಮಡಿ ಒಡೆಯುವ ಸಮಸ್ಯೆ ಇದೆ. ಹೆಚ್ಚಾಗಿ ಇದು ತೋಟದಲ್ಲಿ ಒಡಾಡುವಾಗ, ಧೂಳು ಇರುವ ಸ್ಥಳದಲ್ಲಿ ಹೋಗುವಾಗ…

Read more
error: Content is protected !!