
ಮಳೆಗಾಲಕ್ಕೆ ಮುಂಚೆ ಔಷಧಿ ಸಿಂಪರಣೆಯಿಂದ ಪ್ರಯೋಜನ ಏನು?
ಅಡಿಕೆ ಬೆಳೆಗಾರರು ಮಳೆಗಾಲ ಪ್ರಾರಂಭವಾದ ನಂತರ ಕೊಳೆ ಔಷಧಿ ಸಿಂಪಡಿಸಿದರೆ ಸಾಕು ಎಂದು ಭಾವಿಸಿದ್ದರೆ ಅದು ತಪ್ಪು. ಮಳೆ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದ ತಕ್ಷಣ ಕೊಳೆ ಔಷಧಿ ಸಿಂಪರಣೆ ಮಾಡಿದರೆ ತುಂಬಾ ಪ್ರಯೋಜನ ಇದೆ.ಕೊಳೆ ರೋಗ ಬಾರದಂತೆ ರಕ್ಷಣೆ (preventive) ನೀಡುವ ಎಲ್ಲಾ ಔಷಧಿಗಳೂ ರೋಗ ಬರುವ ಮುಂಚೆ ಬಳಕೆ ಮಾಡಿದರೆ ಮಾತ್ರ ಫಲಪ್ರದವಾಗಿರುತ್ತವೆ. ಅಡಿಕೆ ಬೆಳೆಗಾರರಲ್ಲಿ ಹೆಚ್ಚಿನವರು ಸರಿಯಾಗಿ ಮಳೆ ಬಂದು ತಂಪಾದ ನಂತರ ಕೊಳೆ ರೋಗ ಬಾರದಂತೆ ತಡೆಯುವ ಬೋರ್ಡೋ ದ್ರಾವಣ ಅಥವಾ ಇನ್ಯಾವುದೋ…