ಕೊಳೆ ರೋಗದ ರೌದ್ರಾವತಾರ- ಯಾಕೆ ಹೀಗಾಗುತ್ತದೆ?
ಅಡಿಕೆ ಕಾಯಿಗಳಿಗೆ ಕೊಳೆ ಬಂದು ತೋಟದಲ್ಲಿ ವಾಸನೆ ಬರುವ ಸ್ಥಿತಿ ಉಂಟಾಗಿದೆ. ಇನ್ನೂ ಮಳೆಯ ಮುನಿಸು ಶಾಂತವಾಗಿಲ್ಲ. ಮುಂದಿನ ವರ್ಷ ಅಡಿಕೆ ಬೆಳೆಗಾರರು ಖರ್ಚಿಗೇನು ಮಾಡುವುದೋ ತಿಳಿಯದಾಗಿದೆ.ಇಂತಹಸ್ಥಿತಿ ಈ ತನಕ ಬಂದಂತಿಲ್ಲ. ಯಾವ ತೋಟಗಾರನನ್ನೂ ಬಿಡದೆ ಕಾಡಿದ ಈ ಕೊಳೆ ರೋಗ ಯಾಕೆ ಈ ರೀತಿ ರೌದ್ರ ರೂಪ ತಾಳಿತು? ಕೊಳೆ ಔಷಧಿ ಸರಿಯಾಗಲಿಲ್ಲವೇ? ಮೈಲುತುತ್ತೆ ಸರಿಯಿಲ್ಲವೇ? ಔಷಧಿ ಸಿಂಪಡಿಸಿದ್ದು ಸರಿಯಾಗಲಿಲ್ಲವೇ ? ಇದು ನಮ್ಮೆಲ್ಲರ ಸಂಶಯದ ಊಹನೆಗಳು. ಆದರೆ ವಾಸ್ತವವೇ ಬೇರೆ. ಆ ವಿಷಯವನ್ನು ನಾವು…
