ಅಡಿಕೆ ದರ ಏರುತ್ತದೆಯೇ ? ಹೀಗೆಯೋ ಮುಂದುವರಿಯುತ್ತದೆಯೋ?
ಕಳೆದ ವರ್ಷದ ಅಡಿಕೆ ಬೆಳೆಯ ಸ್ಥಿತಿ ನೋಡಿದರೆ ದರ ಇನ್ನೂ ಏರಿಕೆಯಾಗಬೇಕಿತ್ತು. ವ್ಯಾಪಾರಿಗಳು, ಅಡಿಕೆಯ ಸಿದ್ದ ಉತ್ಪನ್ನ ತಯಾರಿಕ ಉದ್ದಿಮೆಗಳು ದರ ಎಷ್ಟಾದರೂ ಆಗಲಿ, ನಮಗೆ ಅಡಿಕೆ ಬೇಕಾಗಿದೆ. ಕಳುಹಿಸಿ ಎಂಬ ಸೂಚನೆ ಕೊಡಬೇಕಿತ್ತು. ಆದರೆ ಅಂತಹ ಬೇಡಿಕೆಯೂ ಇಲ್ಲ. ದರ ಏರಿಕೆಯೂ ಆಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಪರವಾಗಿಲ್ಲವಾದರೂ ಬೆಳೆ ಲೆಕ್ಕಾಚಾರ ನೋಡಿದರೆ ಬೇಡಿಕೆಯೋ ಬೇಡಿಕೆ ಆಗಬೇಕಿತ್ತು. ಕಾರಣ ಏನಿರಬಹುದು? ಕಳೆದ ವರ್ಷ 50%ದಷ್ಟು ಬೆಳೆ ನಷ್ಟವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅರ್ಧದಷ್ಟೂ ಇಲ್ಲ….
