
ಆಷಾಢ ಅಮಾವಾಸ್ಯೆಯೂ – ಪಾಲೆ ಮರದ ಚೆಕ್ಕೆಯೂ…
ಆಟಿ ಅಥವಾ ಆಷಾಡ ಮಾಸದ ಅಮವಾಸ್ಯೆಯಂದು ಬೆಳ್ಳಂಬೆಳಗ್ಗೆ ಪಾಲೆ/ ಮದ್ದಾಲೆ ಮರದ ಚೆಕ್ಕೆಯನ್ನು ತೆಗೆದು ಅದರ ರಸವನ್ನು ಸೇವಿಸುವ ಅನಾದಿ ಕಾಲದ ಕ್ರಮದ ಕುರಿತಾಗಿ, ಯಾಕೆ ಏನು ಎಂಬ ಕುತೂಹಲ ಇದ್ದವರಿಗೆ ಸಮಯೋಚಿತವಾಗಿ ವೈಜ್ಞಾನಿಕ ಅಂಶಗಳ ಅನಾವರಣ ಇಲ್ಲಿದೆ. ಓದಿಕೊಂಡು ಭಕ್ತಿ ಭಾವದಿಂದ ಇದನ್ನು ಮಾಡಿ. ಪಾಲೆ ಕೆತ್ತೆ ರಸ ಸೇವನೆಗೆ ಜಾತಿ ಧರ್ಮದ ಯಾವ ಅಬ್ಯಂತರವೂ ಇಲ್ಲ. ಇದು ಮಾನವನ ಆರೋಗ್ಯ ದೃಷ್ಟಿಯಿಂದ ಹಿರಿಯರು ಮಾಡಿಕೊಂಡು ಬಂದ ಕ್ರಮ. ಬಹುಶಃ ನಮ್ಮ ಹಿರಿಯರು ವೈಜ್ಞಾನಿಕ ಶಿಕ್ಷಣ…