
ಯೂರಿಯಾ ಗೊಬ್ಬರ ಎಂದರೇನು. ಹೇಗೆ ಬಳಸಬೇಕು?
ಯೂರಿಯಾ ಇದು ನಮಗೆಲ್ಲಾ ಗೊತ್ತಿರುವ ಸಾರಜನಕ ಒದಗಿಸುವ ಪೋಷಕಾಂಶ. ಜಗತ್ತಿನಾದ್ಯಂತ 90% ಕ್ಕೂ ಹೆಚ್ಚು ಸಾರಜನಕ ಗೊಬ್ಬರವಾಗಿ ಬಳಸಲ್ಪಡುವುದು ಯೂರಿಯಾ. ಕೇವಲ ಸಾರಜನಕ ಮಾತ್ರ ಇರುವ, ಅತ್ಯಧಿಕ ಪ್ರಮಾಣದಲ್ಲಿಯೂ ಇರುವ ಏಕೈಕ ರಸಗೊಬ್ಬರ ಎಂದರೆ ಯೂರಿಯಾ. ಇದನ್ನು ಹೇಗೆ ತಯಾರಿಸಲಾಗುತ್ತದೆ, ಹೇಗೆ ಅದು ಹರಳು ರೂಪದಲ್ಲಿ ನಮಗೆ ಸಿಗುತ್ತದೆ. ಅದನ್ನು ಹೇಗೆ ಬೆಳೆಗಳಿಗೆ ಬಳಸಬೇಕು ಎಂಬುದು ರೈತರಾದವರಿಗೆ ಅಗತ್ಯವಾಗಿ ತಿಳಿದಿರಬೇಕು. ಯೂರಿಯಾ ಅಂಶವನ್ನು ಫ್ರೆಂಚ್ ರಸಾಯನ ಶಾಸ್ತ್ರ ವಿಜ್ಞಾನಿಯು ಹಿಲೆರ್ ರೋಯಲ್ ಮೂತ್ರದಲ್ಲಿ ಮೊದಲು ಪತ್ತೆ ಮಾಡಿದನು…