ಬಿಳಿ ಅಡಿಕೆ -ಚಾಲಿ

ಅಡಿಕೆ- ಸೋಮವಾರ ಮಾರುಕಟ್ಟೆಗೆ ಚೇತರಿಕೆ ಬಂದಿದೆ.

ಕಳೆದ ಎರಡು ತಿಂಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಮೌಢ್ಯದ ವಾತಾವರಣ ಇತ್ತು. ಆದರೆ ಈಗ ಮತ್ತೆ ಚೇತರಿಕೆಯ ಹುರುಪು ಕಾಣಲಾರಂಭಿಸಿದೆ. ಕೊರೋನಾ ಲಾಕ್ ಡೌನ್ ಮುನ್ಸೂಚನೆ ಇದ್ದ ಕಾರಣ ಮುಂಚೆಯೇ ಅಡಿಕೆ ಮಾರುಕಟ್ಟೆಯಲ್ಲಿ ಸ್ವಲ್ಪ ತಲ್ಲಣ ಉಂಟಾಗಿತ್ತು. ನಂತರ  ಕೊರೋನಾ ಲಾಕ್ ಡೌನ್, ಜನ ಒಡಾಟಕ್ಕೆ ಸಮಯ ಮಿತಿ ಮುಂತಾದವುಗಳು ಪ್ರಾರಂಭವಾದ ನಂತರ ಸ್ವಲ್ಪ ಹಿನ್ನಡೆ ಉಂಟಾಯಿತು. ಸಾಂಸ್ಥಿಕ ಖರೀದಿದಾರರು ಖರೀದಿಗೆ ಮಿತಿ ನಿರ್ಧರಿಸಿದರು. ದರ ಸ್ಥಿರತೆಯನ್ನು ಕಾಯ್ದುಕೊಂಡರು. ಖಾಸಗಿಯವರು ಸಮಯಮಿತಿಯೊಳಗೆ ಸ್ವಲ್ಪ ಕಡಿಮೆ ದರದಲ್ಲಿ ಖರೀದಿ ನಡೆಸುತ್ತಿದ್ದರಾದರೂ…

Read more
ಸಾವಯವ ಕೃಷಿಕ -Organic farmer -

ಸಾವಯವ ಬೇಸಾಯ ರಾಷ್ಟ್ರೀಯ ನಷ್ಟಕ್ಕೆ ಒಂದು ಕೊಡುಗೆಯೇ?.

ಬಹಳ ಜನ ಸಾವಯವ ಬೇಸಾಯ ಕ್ರಮವನ್ನು ತಮ್ಮ ಮೈಮೇಲೆ ಎಳೆದುಕೊಂಡವರಂತೆ ವರ್ತಿಸುತ್ತಾರೆ. ಇವರಲ್ಲಿ ಗರಿಷ್ಟ ಜನ ರಜಾ ಕಾಲದ ಕೃಷಿಕರು. ಮತ್ತೆ ಕೆಲವರು ಕಾಟಾಚಾರಕ್ಕೆ ಕೃಷಿ ಮಾಡುವವರು. ನಾನು ಸುಮಾರು 20 ವರ್ಷಕ್ಕೆ ಹಿಂದೆ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಸಾಲದ ಹಣ. ಭೂಮಿಯ ಬೆಲೆ ಆಗಲೇ ದುಬಾರಿಯಾಗಿತ್ತು. ನನಗೆ ಭೂಮಿಗೆ ಹಾಕಿದ ಹಣ , ನನ್ನ ಬೇಸಾಯದ ಖರ್ಚನ್ನು ಹಿಂಪಡೆಯುವ ಬಯಕೆ ಸಹಜವಾಗಿ ಎಲ್ಲರಿಗೂ ಇದ್ದಂತೆ ಇತ್ತು. ನಾನು ಸಾವಯವ ಕೃಷಿ ಎಂದು ಅದರ…

Read more
waiting for food

ಮಂಗಗಳ ಕಾಟಕ್ಕೆ ಮುಕ್ತಿ ಬೇಕೇ? ಮಳೆಗಾಲದಲ್ಲಿ ಇದನ್ನು ಮಾಡಿ.

ಮಂಗಗಳ ಕಾಟ , ಅಳಿಲು, ನವಿಲು, ಹಂದಿ, ಆನೆ, ಕಾಡು ಕೋಣಗಳ ಹಾವಳಿಯಲ್ಲಿ ಕೃಷಿ ಹಾಳಾಗುತ್ತಿದೆಯೇ? ಹಾಗಿದ್ದರೆ ಈ ಮಳೆಗಾಲದಲ್ಲಿ ಒಂದು ದಿನ ಪ್ರತೀಯೊಬ್ಬರೂ ಇದನ್ನು ಮಾಡಿ. ಕೆಲವು ಸಮಯದಲ್ಲಿ ಅವು ನಿಮ್ಮ ತಂಟೆಗೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ಉಳಿಯಬೇಕಾದರೆ ಇದನ್ನು ನಾವೇ ಮಾಡಬೇಕು. ಮೊನ್ನೆ ಕೊರೋನಾ ಲಾಕ್ ಡೌನ್ ಇದ್ದರೂ ಸಹ ಜೂನ್ 5 ರಂದು ಪೇಟೆ ಪಟ್ಟಣಗಳಲ್ಲಿ  ಕೆಲವು ಸಂಘಟನೆಗಳು ಕಸ ಹೆಕ್ಕಿದರು, ಕೆಲವರು ರಸ್ತೆ ಬದಿಗಳಲ್ಲಿ ಸಸಿ ನೆಟ್ಟರು.ಯಾರೋ ಉಡುಗೊರೆಯಾಗಿ ಕೊಟ್ಟ…

Read more
Urea

ನ್ಯಾನೋ ಯೂರಿಯಾ – ಉಪಯೋಗ ಮತ್ತು ಅನುಕೂಲ.

ನ್ಯಾನೋಯೂರಿಯಾ ಎಂಬ ಹೊಸ ಹೆಸರು ಬಹಳ ಜನರಿಗೆ  ಹೊಸ ಆಕಾಂಕ್ಷೆಯನ್ನು ತಂದಿರಬಹುದು.  ಒಂದು ಗೊಂದಲವನ್ನೂ ಉಂಟುಮಾಡಿರಬಹುದು. ಆದಾಗ್ಯೂ ನ್ಯಾನೋ ಯೂರಿಯಾ ಎಂದರೆ ಏನು ಎಂಬುದು ಪ್ರತೀಯೊಬ್ಬ ಕೃಷಿಕನಿಗೂ ತಿಳಿದಿರಬೇಕು. ಮುಂದಿನ ದಿನಗಳಲ್ಲಿ ನಮ್ಮ ತಂತ್ರಜ್ಞರು ಸರಿಯಾಗಿ ಕೆಲಸ ಮಾಡಿದ್ದೇ ಆದರೆ ಕೃಷಿ ಒಳಸುರಿಗಳಾದ ಕೀಟನಾಶಕ, ಶಿಲೀಂದ್ರ ನಾಶಕ , ಬೆಳವಣಿಗೆ ಪ್ರಚೋದಕ, ರಸ ಗೊಬ್ಬರ ಎಲ್ಲವೂ ನ್ಯಾನೋ ತಂತ್ರಜ್ಞಾನದ ಮೂಲಕ ರೈತರಿಗೆ ಸಿಗಲಿದೆ. ಕೃಷಿಯಲ್ಲಿ ನ್ಯಾನೋ ತಂತ್ರಜ್ಞಾನ ಹೊಸತಲ್ಲ. ನ್ಯಾನೋ ಎಂದರೆ ಬುಟ್ಟಿಯಲ್ಲಿ ಕೊಡುವುದನ್ನು ಮುಷ್ಟಿಯಲ್ಲಿ ಕೊಟ್ಟಂತೆ….

Read more
fertiliser broadcasting -ರಸಗೊಬ್ಬರ ಹಾಕುವುದು

ರಸಗೊಬ್ಬರದ ಬೆಲೆ ಈಗ ಇಳಿಕೆಯಾಗಿದೆ

ಒಂದು ತಿಂಗಳ ಹಿಂದೆ ರಸಗೊಬ್ಬರದ (fertiliser)ಬೆಲೆ ಹೆಚ್ಚಳವಾಗಿತ್ತು. ಇದು ತಡವಾಗಿ ಸರಕಾರದ ಗಮನಕ್ಕೆ ಬಂದು, ಈಗ ಅದು ಯಥಾಸ್ಥಿತಿಗೆ ಬಂದಿದೆ. ರಸಗೊಬ್ಬರ ಎಂಬುದು ದೇಶದ ಕೃಷಿ ಉತ್ಪಾದನೆಯನ್ನು ನಿರ್ಧರಿಸುವ ಪ್ರಮುಖ ಕೃಷಿ ಒಳಸುರಿಯಾಗಿದ್ದು, ಇದರ ತಯಾರಿಕೆ ದೇಶದಲ್ಲಿ ಅತೀ ದೊಡ್ಡ ಆದಾಯದ ಉದ್ದಿಮೆಯಾಗಿ ಬೆಳೆದಿದೆ. ದೇಶದಾದ್ಯಂತ ಸುಮಾರು 12 DAP ಉತ್ಪಾದನಾ ದೊಡ್ಡ  ಘಟಕಗಳೂ,  ಸುಮಾರು 32 ಯೂರಿಯಾ  ಉತ್ಪಾದಕ ದೊಡ್ಡ ಘಟಕಗಳು, ಮತ್ತು 57 ಯೂರಿಯಾ ಮತ್ತು DAP ಎರಡನ್ನೂ ತಯಾರಿಸುವ ದೊಡ್ಡ ಘಟಕಗಳು ಭಾರತ…

Read more
farmer selling pumpkins

ಮುಂದಿನ ಹಂಗಾಮಿಗೆ ಬೆಳೆ ಯೋಜನೆ ಬದಲಾಯಿಸಿಕೊಳ್ಳಿ.

ರೈತರೇ ಮುಂದಿನ ವರ್ಷದ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದು, ಕೆಲವು ಆಯ್ದ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೇ ಬೇಡವೇ ಎಂದು ಎರಡೆರಡು ಬಾರಿ ಯೋಚಿಸಿ ಮುನ್ನಡೆಯಿರಿ. ಒಂದೆಡೆ ಕೊರೋನಾ ಮಹಾಮಾರಿ ಮನುಕುಲವನ್ನು ಅಟ್ಟಾಡಿಸುವಂತೆ ಕಾಣಿಸುತ್ತದೆ. ಇದು ಕಳೆದ ವರ್ಷಕ್ಕೆ ಮುಗಿಯಲಿಲ್ಲ, ಈ ವರ್ಷವೂ ವಕ್ಕರಿಸಿದೆ. ಇದು ಬೇಗ ಮುಗಿಯುವಂತೆ ಕಂಡು ಬರುವುದಿಲ್ಲಅ ಮುಂದೆ ಏನು ಎಂದು ಪ್ರಶ್ಣೆಯಾಗಿಯೇ ಇದೆ. ಹವಾಮಾನ ಸಹ ತನ್ನ ಮಾಮೂಲು ಚಕ್ರವನ್ನು ಬದಲಿಸಿದಂತಿದೆ. ಮುಂಗಾರು ಸಹ ಕೈಕೊಡಬಹುದೇನೋ ಅನ್ನಿಸುತ್ತಿದೆ. ಪೆಟ್ರೋಲ್ –ಡೀಸೆಲ್ ಬೆಲೆ ಗಗನಕ್ಕೇರಿದೆ.ಸರಕಾರವೂ…

Read more

ಕಡ್ಡಾಯವಾಗಿ ತೆರಿಗೆ ಪಾವತಿಸುವ ಏಕೈಕ ನಾಗರೀಕರು -ರೈತರು

ಎಲ್ಲರ ದೃಷಿಯಲ್ಲಿ ರೈತರು  ಸರಕಾರದ ಸವಲತ್ತು ಪಡೆಯುವವರು ಎಂದು ಗುರುತಿಸಲ್ಪಟ್ಟವರು. ಆದರೆ ವಾಸ್ತವ ಇವರು ಟ್ಯಾಕ್ಸ್ ಕಟ್ಟುವವರು. ಸಮಾಜ ರೈತ ಎಂದರೆ ಸರಕಾರದ ಕಡಿಮೆ ಬಡ್ಡಿ ದರದ ಸಾಲಪಡೆಯುವವ. ಕೇಂದ್ರ ಸರಕಾರದ ಬಳುವಳಿಯಾದ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯುವವ. ಸಬ್ಸಿಡಿ, ಸವಲತ್ತು  ಪಡೆಯುವ. ಎಂದು ತಿಳಿದಿದ್ದಾರೆ. ವಾಸ್ತವವಾಗಿ ಸರಕಾರ ಇವರಿಗೆ ಕೊಡುವುದೇನಿದ್ದರೂ ಕಿತ್ತುಕೊಂಡದ್ದರ 10%  ಮಾತ್ರ.  ರೈತ ಎಂದರೆ ಸರಕಾರವನ್ನು ಸಾಕುವವ. ದೇಶದ ಆರ್ಥಿಕತೆಗೆ ರೈತನ ಕೊಡುಗೆ ಸಣ್ಣದಲ್ಲ. ಇದನ್ನು ಎಲ್ಲರಿಗೂ ತಿಳಿಸಿ. ರೈತನನ್ನು ಮೊದಲ…

Read more

ಅಡಿಕೆ ಬೆಳೆಗಾರರೇ ನೀವು ಇದನ್ನು ಒಪ್ಪುತ್ತೀರಾ?

ಒಬ್ಬ ವೈದ್ಯನ ಮಗ ವೈದ್ಯನಾದರೆ ಅವನ ವೃತ್ತಿ ಕ್ಷಮತೆಯಲ್ಲಿ ಇರುವ ಹಿಡಿತ ಬೇರೆಯವರಲ್ಲಿ ಬರಲು ಸ್ವಲ್ಪ ಕಷ್ಟವಾಗುತ್ತದೆ. ಇದನ್ನು ನೀವು ಗಮನಿಸಿರಬಹುದು.ಇದು ಬರೇ ವೈದ್ಯ ವೃತ್ತಿಗೆ ಮಾತ್ರವಲ್ಲ ಎಲ್ಲಾ ವೃತ್ತಿ ಕ್ಷೇತ್ರಕ್ಕೂ ಹುಟ್ಟು ಸಹಜವಾದ ಅನುಭವ ಅರ್ಜಿತ ಅನುಭವಕ್ಕಿಂತ ಮಿಗಿಲಾಗಿರುತ್ತದೆ. ಅಡಿಕೆ ಬೆಳೆಗೆ ಸಲಹೆ ಕೊಡುವವರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಅಡಿಕೆ ಬೆಳೆಯನ್ನು ಹುಟ್ಟಿನಿಂದ ಕಂಡವರಿಗಿಂತ ಹೆಚ್ಚಿನ ಜ್ಞಾನವನ್ನು ಇವರು ಸಂಪಾದಿಸಿದವರಂತೆ ವರ್ತಿಸುತ್ತಾರೆ. ಬೆಳೆ ಬಗ್ಗೆ ಉಪದೇಶ ಮಾಡುತ್ತಾರೆ. ಒಂದು ಬದಿಯಲ್ಲಿ ಅವರ ಈ ಎಲ್ಲಾ ಸೇವೆಯ…

Read more
ಅಡಿಕೆ -ಹಳದಿ ಎಲೆ ರೋಗ ಪರಿಹಾರದ ನಿರೀಕ್ಷೆ ಬೇಡ

ಅಡಿಕೆ -ಹಳದಿ ಎಲೆ ರೋಗ ಪರಿಹಾರದ ನಿರೀಕ್ಷೆ ಬೇಡ.

ಅಡಿಕೆ ಬೆಳೆಗೆ ಬಾಧಿಸಲ್ಪಟ್ಟ ಹಳದಿ ಎಲೆ ರೋಗ ಈಗಿನ ಪರಿಸ್ಥಿತಿಯಲ್ಲಿ ಇನ್ನು ನೂರು ವರ್ಷ ಕಳೆದರೂ ನಿವಾರಣೆ ಅಗುವುದಿಲ್ಲ, ಯಾಕೆ ಕೇಳಿ. ಅಡಿಕೆ ಬೆಳೆಯಲಾಗುವ ಕರ್ನಾಟಕದ ಮಲೆನಾಡಿನ ಭಾಗಗಳಾದ ಶ್ರಿಂಗೇರಿ, ಕೊಪ್ಪ, ಬಾಳೆಹೊನ್ನೂರು, ಕಳಸ ಮುಂತಾದ ಕಡೆ ಎಲೆ ಹಳದಿಯಾಗುವ ಸಮಸ್ಯೆ ಪ್ರಾರಂಭವಾಗಿ ಸುಮಾರು 40 ವರ್ಷಗಳಾಗಿರಬಹುದು.  ಎಲೆ ಹಳದಿಯಾಗುವುದಕ್ಕೆ ಒಂದು ರೋಗ ಎಂದು ನಾಮಕರಣ ಮಾಡಲಾಗಿದೆ. ಪೈಟೋ ಪ್ಲಾಸ್ಮಾ ತರಹದ ಜೀವಾಣು ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಜಗತ್ತಿನಲ್ಲಿ ಈ ಜೀವಾಣುವನ್ನು ನಿಯಂತ್ರಿಸಬಲ್ಲ…

Read more

ಪ್ರಗತಿಪರ ಕೃಷಿಕ- ಹರಿಶ್ಚಂದ್ರ ಶೆಟ್ಟಿಯವರು ನಮ್ಮನ್ನು ಅಗಲಿದ್ದಾರೆ.

ಪುತ್ತೂರು ತಾಲೂಕು ಇಚಿಲಂಪಾಡಿಯಲ್ಲಿ ಹಲವಾರು ವರ್ಷಗಳಿಂದ ಕೃಷಿ ಮಾಡುತ್ತಿದ್ದು, ಆಧುನಿಕ ಚಿಂತನೆಯ ಕೃಷಿ ಮೂಲಕ ಹೆಸರು ಮಾಡಿದ್ದ ಹಿರಿಯ ಕೃಷಿಕ, ಹರಿಶ್ಚಂದ್ರ ಶೆಟ್ಟಿ ಇವರು ನಮ್ಮನ್ನು ಅಗಲಿದ್ದಾರೆ. ಕೃಷಿ ವೃತ್ತಿಯನ್ನು  ಲಾಭದಾಯಕವಾಗಿ  ಹೇಗೆ ಮುನ್ನಡೆಸಬಹುದು ಎಂಬುದಕ್ಕೆ ಮಾದರಿಯಾಗಿದ್ದ ಶ್ರೀಯುತರು ತಮ್ಮ ಕೃಷಿ ಭೂಮಿಯಲ್ಲಿ ವೈವಿದ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯ ಆದಾಯವನ್ನು  ಹೆಚ್ಚಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದವರು. ಇವರು ಕೈಯಾಡಿಸದ ಕೃಷಿಯೇ ಇಲ್ಲ. ಜನೋಪಾಕಾರಿಯಾಗಿದ್ದವರು, ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಇವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಗ್ಗೆ (23-03-2021 ಮಂಗಳವಾರ) …

Read more
error: Content is protected !!